ಹೌದು, ಬೆಳೆದ ಕರ್ಗುಂಜಿ(ಕಲ್ಲಂಗಡಿ) ಹಣ್ಣಿಗೆ ಸರಿಯಾದ ದರ ಮಾರುಕಟ್ಟೆಯಲ್ಲಿ ಸಿಗಲಿಲ್ಲ. ಖರ್ಚು ಮಾಡಿದ್ದು ರೂ.10000, ಸಿಗುವುದು ರೂ.5000, ಹಾಗಾಗಿ ನಮ್ಮೂರಿನ ಅರಾಲು ಗದ್ದೆಯಲ್ಲಿ ಬೆಳೆದ ಕಲ್ಲಂಗಡಿ ಹಣ್ಣುಗಳನ್ನು ಸುಮಾರು ಸ್ನೇಹಿತರ ಮನೆಗಳಿಗೆ ಉಚಿತವಾಗಿ ಹಂಚಿದರು ನನ್ನ ಮಿತ್ರ ಶ್ರೀ ಚನ್ನಯ್ಯ ಪೂಜಾರಿ. ಕಳೆದ ವರ್ಷ ಮಂಗಳೂರು ಸೌತೆ ಬೆಳೆದಿದ್ದರು. ಹೀಗೆ ದರ ಸಿಗದೆ ದೇವಸ್ಥಾನಗಳಿಗೆ ಉಚಿತವಾಗಿ ಕೊಟ್ಟಿದ್ದರು. ನಮ್ಮೂರಿನ ಶ್ರೀ ಕೃಷ್ಣ ಪೂಜಾರಿ ಸ್ವತಃ ಕೃಷಿ ಮಾರುಕಟ್ಟೆ ನಿಯಂತ್ರಣ ಮಂಡಳಿಯ ಸದಸ್ಯರು. ಅವರಿಂದಲೂ ಏನು ಮಾಡಲಾಗಲಿಲ್ಲ. ಅವರೂ ಕೂಡಾ ತಾವು ಬೆಳೆದ ತರಕಾರಿಗಳನ್ನು "ಅಡ್ಡಾ ದುಡ್ಡಿಗೆ" ಕೊಡುತ್ತಿದ್ದಾರೆ. ಇದು ಬರೀ ನಮ್ಮ ಒಂದು ಊರಿನ ರೈತರ ಸಮಸ್ಯೆಯಲ್ಲ. ಇಡೀ ದೇಶದ ರೈತರ ಸಮಸ್ಯೆ. ಈ ವೀಡಿಯೋ ನೋಡಿ.
0 Comments